Saturday, October 28, 2006
ಬದುಕಿನ ಒಳ ತಿರುವಿನಲ್ಲಿ ಏನಿದೆಯೋ ಬಲ್ಲವರಾರು ?
ಅರಿಯದ ಮುಗ್ದ ಮನದ ತೊಳಲಾಟ ಅರಿತವರು ಯಾರು ?
ಏನನ್ನೋ ಬಯಸುತ್ತದೆ ಮನ ಅದಕೆ ಕಟ್ಟೆ ಕಟ್ಟುವವರು ಯಾರು !
ಆ ನಿರೀಕ್ಷೆಯಲಿ ಸಾಗುತಿದೆ ಈ ದಿನದ ಜೀವನ
ಅರಿವಿಲ್ಲದ ಕಡೆ ನಡೆಯುತಿದೆ ಗುರಿಯಿಲ್ಲದ ಪಯಣ
ನಿನ್ನ ಕಂಡ ದಿನ ಮನದಲಿ ಏನೋ ಹೇಳಲಾಗದ ಆನಂದ
ಕುಣಿದಿದ್ದೆ ನಾನೇ ನನಗರಿವಿಲ್ಲದೆ ಆನಂದದಿಂದ
ಮನ ನಲಿಯುತಿದೆ ಅದಕೆ ಕಾರಣದ ಅರಿವಿಲ್ಲ
ಖುಷಿಯ ಮನಕೆ ಈಗ ಕಾರಣವೂ ಬೇಕಿಲ್ಲ !
ಇದ್ದೆ ನಾ ನನ್ನ ಪಾಡಿಗೆ ಏನು ಅರಿವಿರಲಿಲ್ಲ ನಿನ್ನ ಕಾಣುವವರೆಗೂ
ಮನ ಹುಚ್ಚು ಪ್ರೀತಿಗೆ ಸೋತಿರಲಿಲ್ಲ ನಿನ್ನ ಪ್ರೀತಿಯಲಿ ಬೀಳುವವರೆಗೂ
ಏನಾಗುತಿದೆ ಅರಿವಗುತಿಲ್ಲ ಮನದ ಒಳಗೂ ಹೊರಗೂ
ಅರಿತು ನೀಡೆ ನಿನ್ನ ಮನ ನನ್ನ ಹೃದಯ ಬೆಳಗುವವರೆಗೂ !
ಮನದ ಚಿತ್ತ ಪಟಲದಲಿ ನೂರಾರು ಭಾವ ತುಂಬಿದವಳು
Subscribe to:
Posts (Atom)