ಆದ್ದರಿಂದ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಿ ಸಂಸಾರವೆಂಬ ನೌಕೆಯನ್ನು ಸುಖಮಯವಾಗಿ ನಡೆಸುವುದಕ್ಕೆ ಕೆಲವು ಸೂತ್ರಗಳನ್ನು ಪರಿಣಿತರೊಂದಿಗೆ ಚರ್ಚಿಸಿ ಕೆಳಗೆ ಕೊಡಲಾಗಿದೆ.
1. ಮನೆಯ ಯಜಮಾನರು ಯಾರು ಅಂತ ಯಾವತ್ತೂ ಚರ್ಚೆ ಮಾಡೋಕೆ ಹೋಗಬೇಡಿ!! ನೀವಲ್ಲ ಅಂತ ಗೊತ್ತಿರುವಾಗ ವಿಷ್ಯ ಕೆದಕಿ ಜಗಳ ಯಾಕೆ?
2. ಒಬ್ಬ ಶಾಸಕ ಕೈ ಕೊಟ್ಟರೆ ಸೆಫ್ಟಿ ಗೆ ಇರಲಿ ಅಂತ ಆಪಶನ್ ಕಮಲ ಮಾಡಿದ ಹಾಗೆ, ಆಪಶನ್ ಹೆಂಡತಿ / ಗಂಡ ಮಾಡಬೇಡಿ!!! (ಎನ್ ಡಿ ಎ, ಯು ಪಿ ಯೆ, ತೃತೀಯ,,,,, ತರ ಅಕ್ರಮ ಕೂಡಿಕೆ ಬೇಡ )
3. ಮನುಷ್ಯ ಕುಡಿದಾಗ ಸತ್ಯ ಹೇಳ್ತಾನೆ ಅಂತೆ, ಆದ್ದರಿಂದ ಮತ್ತೇರಿದಾಗ ನಿಮ್ಮ ಸಂಗಾತಿ ಹತ್ತಿರ ಕಾಲೇಜ್ ಜೀವನದ ಬಗ್ಗೆ ಮತಾಡ ಬೇಡಿ. ಕೆಲವೊಂದು ಕೃಷ್ಣ ಲೀಲೆ ಗಳು ಹೊರಬಾರದೇ ಇರುವುದು ಉತ್ತಮ ಅಲ್ಲವೇ.4. ನಿಮ್ ಮೈಲ್ ಇಡಿ ಗೆ ಪಾಸ್ ವರ್ಡ್ ಆಗಿರೋ ನಿಮ್ ಹಳೆ ಗರ್ಲ್ ಫ್ರೆಂಡ್ / ಬಾಯ್ ಫ್ರೆಂಡ್ ಹೆಸ್ರನ್ನ ತೆಗೆದು ಬಿಡಿ!! ಯಾವತ್ತಾದ್ರೂ ನಿಮ್ ಪಾಸ್‌ವರ್ಡ್ ಗೊತ್ತಾಗಿ, ಗಲಾಟೆ ಆಗಬಹುದು.
5. ಹೆಂಡತಿ ಹಾಡು ಹೇಳೋಕೆ ಶುರು ಮಾಡಿದ್ರೆ ಗಂಡ ಹೊರಗೆ ಹೋಗಿ ಕುಳಿತು ಕೊಳ್ಳೋದು ಒಳಿತು, ಇದರಿಂದ ನೀವು ಹೆಂಡತಿಗೆ ಹೊಡಿತ ಇದ್ದೀರ ಅಂತ ಜನ ತಪ್ಪು ತಿಳಿಯೋಲ್ಲ.
6. ಹೆಂಡತಿಗೆ ಸಿಟ್ಟು ಬಂದಾಗ ಅಡುಗೆ ಮನೆಗೆ ಬಿಡಬೇಡಿ…ಅಲ್ಲಿ ಅವರ ವೆಪನ್ಸ್ ಇರ್ತವೆ ಲೈಕ್ ಲಟ್ಟಣಿಗೆ , ಮಗಚೋ ಕೈ…
7. ಸಾಫ್ಟ್ ವೇರ್ ಇಂಜಿನಿಯರ್ ನ ಮದುವೆ ಆಗೋದು ಒಳ್ಳೆಯದು ಅನ್ಸುತ್ತೆ, ಅವರು ಹಗಲು ಯಾವಾಗ್ಲೂ ಓಫೀಸ್ ನಲ್ಲೇ ಇರ್ತಾರೆ, ವೀಕ್ ಎಂಡ್ ಮನೇಲಿ ಇದ್ರು ಲ್ಯಾಪ್ ಟಾಪ್ ಹಿಡಿದು ಕೆಲ್ಸಾ ಮಾಡ್ತಾ ಇರ್ತಾರೆ, ಇವರಿಗೆ ಜಗಳ ಮಾಡೋ ಅಷ್ಟು ಟೈಮ್ ಕೂಡ ಇರೋಲ್ಲ!!!!
kaddiddu. . .
No comments:
Post a Comment