Thursday, July 15, 2010

ನಮ್ಮದೇ ನಾಡಿನ ನೇಗಿಲಯೋಗಿಗೆ ನಮ್ಮದೇ ಸರ್ಕಾರಗಳಿಂದ ಆಗಿರುವ ಅನ್ಯಾಯದ ಕಥೆಯಿದು...

ಆತ್ಮೀಯರೇ, 

          ಹೃದಯ ಕಲಕುವ ವೀಡಿಯೊ ಒಂದು ಈ ಮೇಲ್ ನ ಜತೆಗಿದೆ.  ದಯಮಾಡಿ ನಿಮ್ಮ ಅಮೂಲ್ಯ ಸಮಯದ ೭ ನಿಮಿಷಗಳನ್ನು ಈ ವೀಡಿಯೊ ನೋಡಲು ಮೀಸಲಿಡಿ.  ಗ್ರೆಗೊರಿ ಪತ್ರಾವೋ ಎಂಬ ನಮ್ಮದೇ ನಾಡಿನ ನೇಗಿಲಯೋಗಿಗೆ ನಮ್ಮದೇ ಸರ್ಕಾರಗಳಿಂದ ಆಗಿರುವ ಅನ್ಯಾಯದ ಕಥೆಯಿದು. ಗ್ರೆಗೊರಿ ಪತ್ರಾವೋ ಯಾರ ಸುದ್ದಿಗೂ ಹೋಗದೆ ತನ್ನ ಪಾಡಿಗೆ ತಾನು ದಕ್ಷಿಣ ಕನ್ನಡದ ಹಳ್ಳಿಯೊಂದರಲ್ಲಿ ಸಾವಯವ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಸಾಧಕ ರೈತ. ಇಂದು ನಾಡಿನ ಎಲ್ಲ ರೈತರನ್ನು ಅಭಿವೃದ್ಧಿಯ ಹೆಸರಲ್ಲಿ ಒಕ್ಕಲೆಬ್ಬಿಸಿ ಅವರ ಜಮೀನು ಊರುಗಳಿಂದ ಅವರನ್ನು ಒದ್ದೋಡಿಸುತ್ತಿರುವ 'ರೈತನೇ ದೇಶದ ಬೆನ್ನೆಲುಬು'  ಆಗಿರುವ ಈ ದೇಶದಲ್ಲಿ ನಮ್ಮ ಪಯಣ ಎತ್ತ ಕಡೆ ಎಂಬುದನ್ನು ನಾವು ಚಿಂತಿಸಬೇಕಿದೆ. ಇದು ಗ್ರೆಗೊರಿ ಒಬ್ಬರ ಕಥೆಯಲ್ಲ. ರೈತ ಕುಟುಂಬಗಳಿಂದ , ಹಳ್ಳಿ ಮನೆಗಳಿಂದ ಬಂದಿರುವ ನಮಗೂ ನಾಳೆ ಇದೇ ಗತಿ ಬರಬಹುದು. ಬನ್ನಿ ಜಾಗೃತರಾಗೋಣ. ರೈತರನ್ನು ಬೆಂಬಲಿಸೋಣ. ಅಭಿವೃದ್ಧಿಯ ಹೆಸರಲ್ಲಿ ನಮ್ಮ ರೈತರನ್ನು ಬೀದಿಗೆ ತಳ್ಳುವ ಹುನ್ನಾರದ ಕುತಂತ್ರದ ವಿರುದ್ಧ ದನಿ ಎತ್ತೋಣ.
ವೀಡಿಯೊ ನೋಡಲು ಕೆಳಗೆ ಕ್ಲಿಕ್ ಮಾಡಿ.... 




ಇಂತಿ ನಿಮ್ಮ ,
ರವೀಂದ್ರ ಬಿ. ಎಚ್.
 

No comments: