Wednesday, October 28, 2009
ನಿನ್ನ ನಗುವ ಮರೆತು ಅಳುವ ಆಸೆ ನನ್ನಗಿಲ್ಲ ಕಣೋ !
ನಿನ್ನ ಜೀವನದ ನೆನಪಿನ ಪುಟದಲ್ಲಿ !
ನನ್ನ ನೆನಪು ನಿನಗೆ ಕಣ್ಣಿರು ತರಿಸಿದರೆ!
ನಿನ್ನ ಕಣ್ಣಿಂದ ಬೀಳುವ ಒಂದು ಒಂದು ಬಿಂದುವನ್ನು ಸೇರಲು !
ನನ್ನ ಕಣ್ಣಗಳು ನದಿಯಾಗಿ ಹರಿಯುತ್ತದೆ ನನ್ನೆದೆಯನ್ನೇ ಕೊರೆದು ....!
ನಿನ್ನ ನಗುವ ಮರೆತ್ತು ಅಳುವ ಆಸೆ ನನ್ನಗಿಲ್ಲ ಕಣೋ !
ನನ್ನ ನಗುವೇ ನಿನಗಿರಲು ! ಅಳಲು ನನ್ನು ಯಾರು ?
ನನ್ನ ಜೀವನದ ಮನಸಿನ ಭಾವನೆಯ ಕನಸು ನೀನು !
ಮರಳಿನ ತೀರದ ಕನಸು ನನದು !
ಅಳಿಸಲು ನಾವು ಯಾರು !
ನಾನು ನನ್ನದು ನನ್ನಿಂದ ಎನುವ ಅಹಂ ಇಲ್ಲ !
ನೇರ ನೋಟ , ನೇರ ಮಾತು ,ನೇರ ವ್ಯಕ್ತಿತ್ವ !
ನೀನು ಇಲ್ಲದೆ ನಾನಿಲ್ಲ , ಎನುವ ಬಾವ ಅವನಲಿಲ್ಲ !
ನಿನ್ನೆ ನಾನಗಿರಲು ,ನಾನು ನಿನಗಿರಲು ,
ನೀನಿಲ್ಲದೆ ಎನುವ ಮಾತೇಕೆ !
ತಿಳಿದವನಂತೆ ನಗಬೇಡ ಗೆಳಯ ಅದು ನೀನಲ್ಲ ಕಣೋ
ಬೇರೆ ಯಾರೋ .........
ನೊಂದ ಕಣ್ಣೀರ ಹನಿ ಕೆನೆ ಇಂದ ಜಾರುತ್ತ !
ತನ್ನ ವೇದನೆಯನ್ನು ತೋರುತ ,ತುಟಿಯ ಬಳಿ ಜಾರಿತ್ತು !
ತುಟಿಯ ಮುಗ್ದ್ದ ಮುಗುಳು ನಗೆ ಕೇಳಿತ್ತು !
ನಿನ್ನ ವೇದನೆ ಅರ್ಥವೇ ಹಾಗುತಿಲ್ಲ ಯಾಕೆ ಈ ಕಣ್ಣಿರು ನಿನಗೆ !
ಕಣ್ಣಿರ ಹನಿ ಹೇಳಿತ್ತು !
ನನ್ನ ವೇದನೆ ಎಂದು ಅರ್ಥವಾಗದು ನಿನಗೆ !
ಎಂದು ಕನ್ನೆಯಿಂದ ಜಾರಿತ್ತು ಕಣ್ಣಿರು ಕೆಳಗೆ............
ಮನದ ಭಾವನೆಗೆ ಕಾರಣ ಬೇಕೆ ?
ಬದುಕಿನ ಒಳ ತಿರುವಿನಲ್ಲಿ ಏನಿದೆಯೋ ಬಲ್ಲವರಾರು ?
ಅರಿಯದ ಮುಗ್ದ ಮನದ ತೊಳಲಾಟ ಅರಿತವರು ಯಾರು ?
ಏನನ್ನೋ ಬಯಸುತ್ತದೆ ಮನ ಅದಕೆ ಕಟ್ಟೆ ಕಟ್ಟುವವರು ಯಾರು !
ಆ ನಿರೀಕ್ಷೆಯಲಿ ಸಾಗುತಿದೆ ಈ ದಿನದ ಜೀವನ
ಅರಿವಿಲ್ಲದ ಕಡೆ ನಡೆಯುತಿದೆ ಗುರಿಯಿಲ್ಲದ ಪಯಣ
ನಿನ್ನ ಕಂಡ ದಿನ ಮನದಲಿ ಏನೋ ಹೇಳಲಾಗದ ಆನಂದ
ಕುಣಿದಿದ್ದೆ ನಾನೇ ನನಗರಿವಿಲ್ಲದೆ ಆನಂದದಿಂದ
ಮನ ನಲಿಯುತಿದೆ ಅದಕೆ ಕಾರಣದ ಅರಿವಿಲ್ಲ
ಖುಷಿಯ ಮನಕೆ ಈಗ ಕಾರಣವೂ ಬೇಕಿಲ್ಲ !
ಇದ್ದೆ ನಾ ನನ್ನ ಪಾಡಿಗೆ ಏನು ಅರಿವಿರಲಿಲ್ಲ ನಿನ್ನ ಕಾಣುವವರೆಗೂ
ಮನ ಹುಚ್ಚು ಪ್ರೀತಿಗೆ ಸೋತಿರಲಿಲ್ಲ ನಿನ್ನ ಪ್ರೀತಿಯಲಿ ಬೀಳುವವರೆಗೂ
ಏನಾಗುತಿದೆ ಅರಿವಗುತಿಲ್ಲ ಮನದ ಒಳಗೂ ಹೊರಗೂ
ಅರಿತು ನೀಡೆ ನಿನ್ನ ಮನ ನನ್ನ ಹೃದಯ ಬೆಳಗುವವರೆಗೂ !
ಮನದ ಚಿತ್ತ ಪಟಲದಲಿ ನೂರಾರು ಭಾವ ತುಂಬಿದವಳು
Tuesday, October 27, 2009
ಕರಿಯನಿಗೊಂದು ಲವ್ ಲೆಟರ್. . .
ಮುನಿಸಿಕೊಂಡಿರುವ ಕರಿಯನಿಗೆ,
ಸುಬ್ಬಾ, ಅಂತು ನನಗೂ ಪತ್ರ ಬರೀಬೇಕು ಅನ್ನಿಸ್ತಿದೆ, ಇಲ್ಲ ಕಣೋ, ಮೊನ್ನೆ ನಾನು ಗಾಳಿ ಆಂಜನೇಯನ ದೇವಸ್ಥಾನಕ್ಕೆ ಬರಲಿಲ್ಲ ಅಂತ ನೀನು ಮುನಿಸ್ಕೊಂಡಿದೀಯ, ಬೆಣ್ಣೆ ಹಚ್ಚೋಕೆ ಈ ಪತ್ರ ಬರೀತಾವ್ಳೆ ಅನ್ಕೋಬೇಡ! ಇದುವರೆಗೆ ನೀನು ಬರ್ದಿರೋ ನೂರ ನಲವತ್ತಾರು ಪ್ರೀತಿ ತುಂಬಿದ ಪತ್ರಗಳ ಮುಂದೆ, ನನ್ನ ಈ ಪ್ರೇಮ ಪತ್ರ (?) ಸಪ್ಪೆ ಸಪ್ಪೆಯಾಗಿ ಕಾಣುತ್ತೆ ಅಂತ ನಂಗೊತ್ತು ಪುಟ್ಟ, ಆದ್ರೆ ನಿನ್ನ ಮೇಲೆ ಆಣೆ ಮಾಡಿ ಹೇಳ್ತೀನಿ, ಆ ನೂರ ನಲವತ್ತಾರು ಪತ್ರಗಳಲ್ಲಿ ನೀನು ಬರ್ದಿರೋದಕ್ಕಿಂತ ಹೆಚ್ಚಾಗಿ ನಾನು ನಿನ್ನ ಪ್ರೀತಿಸ್ತೀನಿ. ಅಸಲಿಗೆ ಈ ಅಕ್ಷರಗಳೆಂಬ ಅಕ್ಷರಗಳಿಗೆ ನಮ್ಮ ಪ್ರೀತೀನ ವ್ಯಕ್ತಪಡಿಸೋ ಶಕ್ತಿ ಇದೆಯೇನೋ? ನಿನ್ನ ನೋಡಿದ ತಕ್ಷಣ ನನ್ನ ಕಣ್ಣಲ್ಲಿ ಮೂಡೋ ಮಿಂಚು, ನೀನು ಕೈ ಹಿಡ್ಕೊಂಡ್ರೆ ನನ್ನೆದೆಯಲ್ಲಾಗೋ ಸಂಭ್ರಮ, ನೀನು ಮುತ್ತಿಟ್ಟರೆ ಹೊಟ್ಟೆಯಾಳದಿಂದ ಹುಟ್ಟೋ ಖುಷಿಯ ನಡುಕ ಇದನ್ನೆಲ್ಲ ಅಕ್ಷರಗಳಲ್ಲಿ ಬರೆದು ಬಿಡೋಕೆ ಆಗುತ್ತ? ಬಿಡು ನಮ್ಮಿಬ್ಬರದೂ ಹುಚ್ಚಿಡಿದು ಸುರಿಯೋ ಮಳೆಗೆ ಬೊಗಸೆಯೊಡ್ಡೋ ಪ್ರಯತ್ನ!
ಆದ್ರೂ ಇವತ್ತು ಬರೀಲೇಬೇಕಂತ ಬರೀತಿದೀನಿ ಸುಬ್ಬಾ, ಸುಬ್ಬಾಐ ಲವ್ ಯು ಕಣೋ. ನನಗೆ ನೀನು ಬೇಕು, ಮತ್ತೆ ನೀನೇ ಬೇಕು ಅಷ್ಟೆ. ಇಲ್ಲ ಕಣೋ ಇದೊಂದು ಜನ್ಮವಿದೆ, ಇದಾದ ಮೇಲೆ ಇನ್ನಾರು ಜನ್ಮಗಳಿವೆ, ಆ ಆರು ಜನ್ಮಗಳು ನೀನು ನನ್ನ ಜೊತೇಲಿರ್ಬೇಕು ಅಂತ ನಾನು ಕೇಳೋಲ್ಲ. ಇದೊಂದೇ ಜನ್ಮದಲ್ಲಿ ಮುಂದಿನ ಸಾವಿರ ಜನ್ಮಗಳನ್ನು ನಾಚಿಸೋ ಹಾಗೆ ನಿನ್ನ ಜೊತೆ ಬದುಕಿ ಬಿಡಬೇಕು. ಒರಟೊರಟಾದ ನಿನ್ನ ಗಡ್ದ ಕೊಡುವ ಸಿಹಿ ನೋವಿನಲ್ಲಿ, ನನಗಷ್ಟೇ ಇಷ್ಟವಾಗೋ ನಿನ್ನ ಮೈಯ ಘಾಟಿನಲ್ಲಿ, ನಿನ್ನ ಮುದ್ದು ಮುದ್ದು ಮಾತಿನಲ್ಲಿ, ಉಸಿರುಗಟ್ಟಿಸೋ ನಿನ್ನ ಅಪ್ಪುಗೆಯಲ್ಲಿ, ಈ ಜನ್ಮ ಮುಗಿಸಿಬಿಡಬೇಕು.
ನಿನ್ನ ಜೊತೆ ಕಳೆಯೋ ಒಂದೊಂದು ಕ್ಷಣಾನೂ ಕಳೆದು ಹೋಗದ ಹಾಗೆ ಕಣ್ಣಲ್ಲಿ ಬಚ್ಚಿಟ್ಕೋ ಬಿಡ್ಬೇಕು. ನಿನ್ನ ಎದೆಯ ಅಷ್ಟೂ ರೋಮಗಳನ್ನ ನನ್ನ ತುಟಿಯಿಂದ ಮುದ್ದಿಸಬೇಕು. ಈ ಜನ್ಮ ಮತ್ತು ಈ ಜನ್ಮ ಪೂರ್ತಿ ಪೂರ್ತಿ ನನ್ನನ್ನೂ ಮರೆತು ನಿನ್ನವಳಾಗಿ ಬಿಡ್ಬೇಕು. ಇದಿಷ್ಟೇ ಅಲ್ವೋ ಸುಬ್ಬಾ ಇನ್ನು ನನ್ನ ಹುಚ್ಚು ಹುಚ್ಚು ಆಸೆಗಳ ಬಗ್ಗೆ ಹೇಳಿದ್ರೇ, ‘ಹೌದೇನೇ ಸುಬ್ಬಿ!!?’ ಅಂತ ನನ್ನ ಕೆನ್ನೆ ಕಚ್ಚಿ ಬಿಡ್ತೀಯ ನೀನು! ನಿನ್ನದು ಮಗುವಿನಂತಹ ಮನಸ್ಸು ಕಣೋ, ಅದನ್ಯಾವತ್ತೂ ನೋಯಿಸಬಾರದು ಅಂತ ಪ್ರತಿಜ್ಞೆ ಮಾಡಿಕೊಂಡಿದೀನಿ. ಆದರೇ ಜಗತ್ತಲ್ಲಿ ಇನ್ಯಾರಿಗೂ ಕೊಡದ ಕಷ್ಟಗಳನ್ನ ಪ್ರೇಮಿಗಳಿಗೇ ಕೊಡ್ತಾನೆ ನಿನ್ನ ದೇವರು ಇದೊಂದು ಸಾರಿ ನನ್ನ ಕ್ಷಮಿಸುಬಿಡು ಪುಟ್ಟಾ, ಈ ಉಸಿರಿರುವವರೆಗೆ ಮತ್ತೆ ನಿನ್ನ ನೋಯಿಸಲ್ಲ, ನನ್ನಾಣೆ!
ನಾಳೆ ಮಲ್ಲಿಗೆ ತೋಟದಲ್ಲಿ ಕಣ್ತುಂಬ ಪ್ರೀತಿ ತುಂಬ್ಕೊಂಡು ನಿನಗಾಗೇ ಕಾಯ್ತಿರ್ತೀನಿ, ನಿನಗಿಷ್ಟವಾಗೋ ಕಪ್ಪು ಚೂಡೀನೇ ಹಾಕ್ಕೊಂಡು ಬರ್ತೀನಿ. ತಲೆಗೆ ಚೂರೇ ಚೂರು ಹರಳೆಣ್ಣೆ ಹಾಕ್ಕೋತೀನೋ, ಇಲ್ಲಾಂದ್ರೆ ಇಷ್ಟುದ್ದದ ನನ್ನ ನಾಗ ಜಡೆ ಎಣಿಯೋದು ಕಷ್ಟ. ಆಮೇಲೆ ಅದರಿಂದಾನೆ ಮತ್ತೆ ತಡವಾಗುತ್ತೆ ನೋಡು, ಅದಕ್ಕೆ ಚೂರೇ ಚೂರು ಹರಳಣ್ಣೆ ಹಾಕಿ ನೀಟಾಗಿ ತಲೆ ಬಾಚ್ಕೊಂಡು, ಅಮ್ಮ ಮುಡಿಸೋ ದಾಸವಾಳ ಹೂವಿಗೆ ದಾರೀಲೇ ಒಂದು ಗತಿ ಕಾಣಿಸಿ, ನಿನ್ನ ಮಲ್ಲಿಗೆ ಮಾಲೆಗೆ ನನ್ನ ತಲೇಲಿ ಜಾಗ ಮಾಡಿಕೊಂಡು, ಆ ಮಲ್ಲಿಗೆ ಹೂಗಳ ಜೊತೆ, ಅದನ್ನರಸಿ ಬರುವ ದುಂಬಿಗಳ ಜೊತೆ, ಅದರೆದೆಯಿಂದ ಉಕ್ಕೋ ಪರಿಮಳದ ಜೊತೆ, ಇಷ್ಟಿಷ್ಟೇ ನಾಚಿಕೊಂಡು, ನಿನಗಾಗೇ ಕಾಯ್ತಿರ್ತೀನಿ. ನಿನ್ನ ಕೋಪವೆಲ್ಲಾ ಮರೆತು ಇದೊಂದ್ಸಲ ಬಂದ್ಬಿಡೋ ಕರಿಯಾ, ಮತ್ತೆ ನೀನು ಕೋಪಾನೇ ಮಾಡ್ಕೊಳ್ಳದ ಹಾಗೆ ಮುತ್ತಿನ ಮಳೆಗರೆದುಬಿಡ್ತೀನಿ. ಬರ್ತೀಯಲ್ವಾ?
ನಿನ್ನವಳೇ,
‘ ಚಿನ್ನು ’

Monday, October 26, 2009
ಕೋತಿಮರೀ!
ಕೋತಿಮರೀ!
ಮೊದಲೆಲ್ಲ ನಿನ್ನ ಹೀಗೆ ಕರಿಯೋಕೆ ಎಷ್ಟು ಚೆನ್ನಾಗಿರ್ತಿತ್ತು ಗೊತ್ತ? ಹೀಗೆ ಕರಿಯೋದೆ ಒಂದು ಹಬ್ಬ. ನಿನ್ನ ತುಂಟತನ, ನಿನ್ನ ಕಪಿಚೇಸ್ಟೆ, ನಿನ್ನ ಹುಡುಗುತನ, ಮತ್ತು ಕೋತಿ……..ಅಂತ ಹೇಳಿ ನೀನು ಹಲ್ಕಿರಿಯುತ್ತಿದ್ದ ನಿನ್ನ ಆ ನಿಶ್ಕಲ್ಮಶ ನಗು ಇದ್ಯಾವುದನ್ನೂ ನನ್ನಿಂದ ಮರಿಯೋಕಾಗುತ್ತಿಲ್ಲ. ನೀನು ಮಾತಿನ ಮಲ್ಲಿ, ಒಂದು ಸಲವು ನಾನು ನಿನ್ನ ಮುಂದೆ ಗೆದ್ದಿದ್ದಿಲ್ಲ ಬರೀ ಸೋತಿದ್ದೆ ಸೋತಿದ್ದು. ಆದರೂ ಪ್ರತಿ ಸಲ ಸೋತಾಗಲು ನಾನೆ ಗೆದ್ದೆ ಅನ್ನುವಷ್ಟು ಖುಷಿ, ಆದರೂ ನೀನು ನನ್ನವಳಲ್ಲ ಅನ್ನುವ ಒಂದೇ ಒಂದು ದೊಡ್ಡ ಸೋಲಿದೆಯಲ್ಲ? ಈ ಸೋಲು ಯಾವತ್ತು ನನ್ನ ಈ ಮುಖದಲ್ಲಿ ನಗುವನ್ನ ಕಾಣದಿರುವ ಹಾಗೆ ಮಾಡಿಬಿಡುತ್ತದೇನೊ..!!
ನನಗೆ ಯಾವುದನ್ನು ಮರಿಯೋದಕ್ಕೆ ಆಗುತ್ತಿಲ್ಲ. ಸುಮ್ಮನೆ ಮರೆತವನಂತೆ ನಾಟಕವಾಡುತ್ತೀನಿ ಅಷ್ಟೆ. ಸಮಸ್ತ ಮೊಬೈಲು ಕಂಪನಿಗಳು ನಮ್ಮಿಬ್ಬರಿಂದಾನೆ ಉದ್ಧಾರವಾದವೇನೊ. ಪ್ರತಿ ಸಲ ಮೊಬೈಲು ಕಳೆದುಕೊಂಡಾಗಲೂ ಕಾಯಿನ್ ಬೂಥುಗಳ ಗುಡಾಣದಂತಹ ಹೊಟ್ಟೆಗೆ ಬರ್ಜರಿ ಮೃಷ್ಟಾನ್ನ ಭೋಜನ ಮಾಡಿಸುತ್ತಿದ್ದೆವು ನೆನಪಿದೆಯಾ? ಮತ್ತೆ ನನ್ನ ಕಡುಗಪ್ಪು ಕೈ ಹಿಡಿದು ನೀನು ರೋಡು ದಾಟಿಸುತ್ತಿದ್ದ ಪರಿಯ ನೆನೆಸಿಕೊಂಡರೇ ಸಾಕು.. ದೇವರೇ.. ಈ ಕೈ ಯಾವತ್ತು ಸಡಿಲಾಗದಂತೆ ಶಾಪ ಕೊಟ್ಟುಬಿಡು ಅಂತ ಅದೆಷ್ಟು ಸಲ ಗೋಗರೆದಿದ್ದೆನೊ..! ನೆನಪಿದೆಯಾ? ಮೊದಲ ಸಲ ನಿನ್ನ ಮುಂದೆ ನಿಂತಾಗ ಬೆವರುತ್ತಿದ್ದ ಪರಿ? “ಯಾಕೊ ಹೀಗೆ ನಡುಗುತ್ತಿದ್ದೀಯ?” ಅಂತ ನೀನು ಕಿಚಾಯಿಸಿದರೆ. “ಬಿಸಿಲಲ್ಲಿ ಬಂದೆ ಅಲ್ಲವಾ ಅದಕ್ಕೆ” ಅಂದ ನಾನು ನಿನ್ನ ಮುಂದೆ ಮಂಗನಾಗಿದ್ದು? ಯಾಕಂದರೆ ಅದು ಜೂನ್ ತಿಂಗಳ ಮದ್ಯಕಾಲ. ಸೂರ್ಯನ ದರ್ಶನವಾಗಿ ಅದೆಷ್ಟು ದಿನಗಳಾಗಿದ್ದವೊ.. ಇನ್ನು ಬೆವರುವ ಮಾತೆಲ್ಲಿ?
ನೀನಾದರೂ ಅಷ್ಟೆ ಯಾವತ್ತು ನಾನು ನಿನಗಿಷ್ಟ ಅನ್ನುವ ಹಾಗೆ ನಡೆದುಕೊಳ್ಳಲಿಲ್ಲ. ಅಸಲಿಗೆ ನೀನು ಯಾವ ಹುಡುಗರನ್ನು ಕಣ್ಣೆತ್ತಿ ಕೂಡ ನೋಡುತ್ತಿರಲಿಲ್ಲ ಬಿಡು. ಆದರೆ ಒಂದು ಹುಡುಗಿ ಹೇಗಿರಬೇಕೊ ಹಾಗಿದ್ದೆ. ಈಗಲು ಹಾಗೆ ಇದ್ದೀಯ ಅದೇ ನಿನ್ನ ಇಷ್ಟಗಲ ಮಗುವಿನಂತಹ ನಗುವಿನೊಂದಿಗೆ. ಅದೇನ ನನಗಿಷ್ಟವಾಗಿದ್ದು? ಎಲ್ಲಾ ಹುಡುಗರ ಹಾಗೆ ನಾನು ಕೇವಲ ನಿನ್ನ ಮಾತಿಗೆ ನಿನ್ನ ನಗುವಿಗೆ ಕರಗಿಬಿಟ್ಟೆನ? ಇಲ್ಲ, ಸಾದ್ಯವೇ ಇಲ್ಲ. ನನಗೆ ಇಷ್ಟವಾಗಿದ್ದು ನೀನು ಅಷ್ಟೆ. ನಿನ್ನೊಳಗಿನ ಆ ನಗು ಮಾತ್ರವಲ್ಲ ಕಣೆ, ಅಮ್ಮನಂತ ಪ್ರೀತಿಯಿದೆ, ಅಕ್ಕನಂತಹ ಅಕ್ಕರೆಯಿದೆ. ಆದರೆ ನೋಡು ನನಗೆ ಇದ್ಯಾವುದನ್ನು ಅನುಭವಿಸುವ ಭಾಗ್ಯವೇ ಇಲ್ಲ. ನಾನು ಅನಾಥ ಅನ್ನುವ ಭಾವ ಕಾಡದಿರುತ್ತದ ಹೇಳು. ನೀನು ಬಿಡು ಎಲ್ಲ ಕುಲ್ಲಂ ಕುಲ್ಲ. ನಾನಿನ್ನು ನಿನಗೇನು ಹೇಳಿರಲೇ ಇಲ್ಲ. ಅಷ್ಟರಲ್ಲಿಯೇ ನೀನು, ಮಾತಿನ ಮದ್ಯೆ “ಈ ಪ್ರೀತಿ ಪ್ರೇಮ ಎಲ್ಲ ನನಗಿಷ್ಟ ಇಲ್ಲಪ್ಪ, ಅಪ್ಪಿತಪ್ಪಿ ಕೂಡ ನನ್ನ ಮೇಲೆ ಯಾವುದೇ ತರಹದ ಭಾವನೆಯಿಟ್ಟುಕೊಳ್ಳಬೇಡ ನಾವಿಬ್ಬರು ಗೆಳೆಯ ಗೆಳತಿಯರಾಗಿದ್ದರೇನೆ ಮಜಾ ಅಲ್ಲವ” ಅಂತ ಇಷ್ಟಗಲ ನಕ್ಕು ಬಿಟ್ಟು ಫೋನಿಟ್ಟೆ ನೆನಪಿದೆಯಾ? ಹೌದು ಹೌದು ಹೌದು ಅಂತ ನಾನು ನಕ್ಕು ಸುಮ್ಮನಾಗಿ ನೀನು ಪೋನಿಟ್ಟ ಮೇಲೆ ಬಿಕ್ಕುತ್ತಿದ್ದೆ.
ಇದೆಲ್ಲವನ್ನ ನಿನಗೆ ಫೋನಿನಲ್ಲೇ ಹೇಳಬಹುದಿತ್ತು. ನಿನ್ನ ಧ್ವನಿ ಕೇಳಿದ ಕೂಡಲೆ ಹೇಳಬೇಕಾಗಿರೊದನ್ನೆಲ್ಲ ಮರೆತು, ಮಂಗನ ಹಾಗೆ ಬಲವಂತದಿಂದ ಯಾವುದೋ ಜೋಕು ಹೇಳಿಕೊಂಡುಬಲವಂತದ ನಗುವನ್ನ ಮುಖದ ಮೇಲೆ ತಂದುಕೊಳ್ಳೊದಕ್ಕೆ ಒದ್ದಾಡುತ್ತೀನಿ. ಅದಕ್ಕೆ ಈ ಪತ್ರ. ಪತ್ರಬರೆದಾದ ಮೇಲಾದ್ರು ನಿನಗೆ ತಲುಪಿಸ್ತೀನಿ ಅನ್ನೊ ಬರವಸೆ ನನಗೂ ಇಲ್ಲ. ಒಂದು ಮಾತು,.. ನಿನ್ನ ನಿರಾಕಾರಣೆ ನನ್ನ ಜೀವನದಲ್ಲಿ ಒಂದು ಕಪ್ಪು ಚುಕ್ಕಿಯಷ್ಟೆ. ಆ ಕಪ್ಪು ಚುಕ್ಕಿ ಮರೆಯಾಗೊದು ಸ್ವಲ್ಪ ತಡವಾಗಬಹುದು. ಇದೇ ಕಾರಣಕ್ಕೆ ನಿನ್ನ ಮೇಲೆ ದ್ವೇಷ ಸಾದಿಸೊಲ್ಲ. ಕನಸಿನಲ್ಲಿಯೂ ಕೂಡ ನಿನ್ನ ಬಗ್ಗೆ ಕೆಡುಕು ಬಯಸೊಲ್ಲ. ಬಾರು ಪಬ್ಬುಗಳ ಗೆಳೆತನ ನನ್ನಿಂದಾಗಲ್ಲ. ಯಾಕಂದ್ರೆ ನಾನು ನಿನ್ನ ಗೆಳೆಯ. ನೀನು ಇಷ್ಟು ಒಳ್ಳೆಯವಳಾಗಿರುವಾಗ ನಾನು ಹೇಗೆ ಅಷ್ಟು ಕೆಟ್ಟವನಾಗಿರೋಕೆ ಸಾದ್ಯ? ಇನ್ನು ತುಂಬಾ ತುಂಬಾ ಹೇಳೋದಿತ್ತು. ಇಷ್ಟು ಹೇಳೋಷ್ಟರಲ್ಲಿಯೇ ಯಾಕೊ ಕಣ್ಣುಗಳೆಲ್ಲ ನೀರು ನೀರಾಗಿ ಪತ್ರವೆಲ್ಲ ಒದ್ದೆಯಾಗುತ್ತಿದೆ. ಉಳಿದಿದ್ದು ನನ್ನೊಳಗೆ ಉಳಿದು ಬಿಡಲಿ ಬಿಡು. ನಾನು ಅಳಿಯುವ ತನಕ
ಇಂತಿ ನಿನ್ನ ಪ್ರೀತಿಯ
ಕರಿಯ. . .

Subscribe to:
Posts (Atom)